Posts

ಪರ್ವ

Image
ನಾನು ಪದವಿಯಲ್ಲಿ ಓದುತ್ತಿದ್ದಾಗ ನನ್ನ ನೆಚ್ಚಿನ ಶಿಕ್ಷಕರು ಪರ್ವ ಓದುವಂತೆ ಪ್ರೇರೇಪಿಸಿದರು ಇದು ನನ್ನ ಯಾವಾಗಲೂ ಕಾಡಿದ ಪುಸ್ತಕ ನಾನು ತಿಳಿದುಕೊಂಡಿದ್ದ ಮಹಾಭಾರತದ ಕಥೆಗಳನ್ನು ತಲೆಕೆಳಕಾಗಿ ಮಾಡಿದಂತಹ ಹೀಗೇ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ಪರಿಹಾರವಾಗದ ಅಂತಹ ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ಪರಿಹಾರವಾಗದ ಅಂತಹ ಅನೇಕ ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ಪರಿಹಾರವಾಗದ ಅಂತಹ ಅನೇಕ ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ಪರಿಹಾರವಾಗದ ಅಂತಹ ಅನೇಕ ತಲೆಕೆಳಕಾಗಿ ಮಾಡಿದಂತಹ ಹೀಗೇ ಇ...

ಸಂಧ್ಯಾರಾಗ

Image
 ಅ.ನ.ಕೃಷ್ಣರಾಯರ “ಸಂಧ್ಯಾರಾಗ” ಕಾದಂಬರಿಯನ್ನು ಓದಿದೆ. ಕಾದಂಬರಿಯಲ್ಲಿ ಕೆಲವು ಇಷ್ಟವಾದವು, ಇನ್ನು ಕೆಲವು ಕಷ್ಟವಾದವು. ಬಹುಶಃ ಎಪ್ಪತ್ತು-ಎಂಬತ್ತು ವರ್ಷದಷ್ಟು ಹಿಂದಿನ ಕಾದಂಬರಿಯನ್ನು ಈಗಿನ ಯುವ ಪೀಳಿಗೆಯಾದ ನಾನು, ಓದಿ ಅರ್ಥ ಮಾಡಿಕೊಂಡ ಪರಿಯಲ್ಲಿರುವ ವ್ಯತ್ಯಾಸಗಳೇ ಕೆಲವು ವಿಷಯ ಇಷ್ಟ ಆಗದೇ ಇರುವುದಕ್ಕೆ ಕಾರಣವೂ ಇರಬಹುದು. ಪ್ರಪ್ರಥಮವಾಗಿ ಇಷ್ಟವಾದ ಸಂಗತಿಗಳ ಪಟ್ಟಿ ಮಾಡುವ. ಮೊದಲಿಗೆ, ಕಾದಂಬರಿ ಓದಿಸಿಕೊಂಡು ಹೋಗುವ ರೀತಿ. ಎಲ್ಲಿಯೂ ನೀರಸ ಅನಿಸುವುದಿಲ್ಲ. ಓದುತ್ತಿರುವಷ್ಟರಲ್ಲೇ ಕಾದಂಬರಿ ಮುಗಿದದ್ದೂ ಸಹ ತಿಳಿಯುವುದಿಲ್ಲ. ಹಾಗೇ ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಅದು ಬದಲಾವಣೆ ಹೊಂದುವ ರೀತಿ ತುಂಬಾ ಇಷ್ಟವಾಯಿತು. ಕಾದಂಬರಿಯ ವಿಷಯ ಅತ್ಯದ್ಭುತ, ಒಂದೊಂದು ಪಾತ್ರ ನಮ್ಮಲ್ಲಿರುವ ಒಂದೊಂದು ಗುಣಗಳ ಪ್ರತಿನಿಧಿಯಾಗಿವೆಯೇನೋ ಎನ್ನಿಸುತ್ತದೆ. ಕರುಣೆಗೆ ಮೀನಾಕ್ಷಮ್ಮನವರ ಪಾತ್ರ, ಎಲ್ಲರನ್ನೂ ಆದರದಿಂದ ಕಾಣಲು ಇರುವ ರಾಯರ ಪಾತ್ರ, ದುರಹಂಕಾರದ ಪ್ರತೀಕವಾಗಿ ರಾಮುವಿನ ಪಾತ್ರ, ಸಂಗೀತದ ಅದಮ್ಯ ಕಲಾಭಿಮಾನಿಯ ಪಾತ್ರದಲ್ಲಿ ಲಕ್ಷ್ಮಣ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪಾತ್ರದಲ್ಲಿ ಸಾವಿತ್ರಮ್ಮ, ಆದರ್ಶ ಪತ್ನಿ, ಸೊಸೆಯಾಗಿ ಜಯ, ವಿಧೇಯರಾಗಿ ಶಾಮಣ್ಣನವರು, ಮುಗ್ಧಳಾಗಿ ಶಾಂತ ಹೀಗೆ ಪ್ರತಿಯೊಂದು ಪಾತ್ರ ತನ್ನದೇ ಆದ ವೈಶಿಷ್ಟ್ಯತೆಯಿಂದ ಮನಸಲ್ಲಿ ನಿಲ್ಲುತ್ತವೆ. ಎಲ್ಲೂ ಯಾವ ಪಾತ್ರವನ್ನು ನಿರ್ಲಕ್ಷ...

, ಕರ್ವಾಲೋ

Image
ಯಾವುದೇ ಪುಸ್ತಕವನ್ನಾದರೂ ಒಮ್ಮೆ ಸಂಪೂರ್ಣ ಓದಿ ನಂತರ ಜೋಪಾನವಾಗಿ ಅದರ ಮೂಲ ಸ್ಥಾನದಲ್ಲಿಟ್ಟುಕೊಳ್ಳುವುದು ರೂಢಿ. ಆದರೆ ಈ ಬಾರಿ ಹಾಗಾಗಲಿಲ್ಲ. ಒಮ್ಮೆ ಓದಿ ಮುಗಿಸಿದ  ಬಳಿಕವೂ ಮತ್ತೆ ,ಮತ್ತೆ ಓದಬೇಕೆಂದನಿಸಿದ್ದು, ಪೂರ್ಣಚಂದ್ರತೇಜಸ್ವಿಯವರ "ಕರ್ವಾಲೋ" ಪುಸ್ತಕ. ಹಾರುವ ಓತಿಕ್ಯಾತನ ಬೆನ್ನತ್ತಿ ಹೋಗುವ ಹೆಸರಾಂತ ವಿಜ್ಞಾನಿ ಕರ್ವಾಲೋ ತೀರಾ ಹಳ್ಳಿಯಲ್ಲಿ ನಡೆಯುವ ಈ ಘಟನೆಯ ಸುತ್ತ ಸುತ್ತುವ ಕಥೆ. ಹಳ್ಳಿಯ ಮಂದಣ್ಣ, ಎಂಗ್ಟ, ಕರಿಯಪ್ಪ, ಮುಂತಾದ ಆ ಹಳ್ಳಿಯ ತೀರಾ ಸಾಮಾನ್ಯ ಜನರೊಂದಿಗೆ ಮಾತ್ರ ಬೆರೆಯುವ ವಿಜ್ಞಾನಿ ಕರ್ವಾಲೋ ಹಳ್ಳಿಯ ಕೆಲವು ಪ್ರಮುಖ ಕುಳಗಳಿಗೆ ಅಂದರೆ ದೊಡ್ಡ ಮನುಷ್ಯರಿಗೆ ಒಗಟಾಗಿಯೇ ಉಳಿಯುತ್ತಾರೆ. ಜೇನುಹುಳಗಳನ್ನು ಹಿಡಿದುಕೊಂಡು ಅವುಗಳನ್ನು ಪೆಟ್ಟಿಗೆಯಲ್ಲಿ ಕೂರಿಸಿ ವಯಸ್ಸಾಗಿದ್ದರೂ ಬುದ್ದಿ ಬೆಳೆಯಲಿಲ್ಲ ಎಂಬಂತೆ ಅಲೆದಾಡಿಕೊಂಡಿದ್ದ ಮಂದಣ್ಣನ ಜತೆ ಸ್ನೇಹ ಸಂಪಾದಿಸಿದ್ದ ಕರ್ವಾಲೋ ಅವರನ್ನು ಕಂಡು ಹಳ್ಳಿಯ ಜನರೆಲ್ಲಾ ತಲೆಗೊಂದರಂತೆ ಮಾತನಾಡಿಕೊಳ್ಳುತ್ತಿದ್ದರು. ಅವರ ಈ ನಡವಳಿಕೆಯನ್ನು ಕಂಡು ಅಪಹಾಸ್ಯ ಮಾಡುತ್ತಿದ್ದರು. ಆದರೆ ಕರ್ವಾಲೋ ಈ ಜನರ ಮಾತನ್ನು ಕೇಳಿಯೂ ಕೇಳದವರಂತೆ ಇದ್ದರು. ಹಳ್ಳಿಗರಿಗೆ ಮಂದಣ್ಣನ ಮೇಲಿದ್ದ ಅಭಿಪ್ರಾಯ ಆತ ಉಂಡಾಡಿಯಾಗಿ ತಿರುಗಾಡಿಕೊಂಡಿರುವವನು, ಎಂಬುದೇ ಹೊರತು ಯಾವುದೇ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಹೀಗಿದ್ದರೂ ಎಲ್ಲರೊಂದಿಗೂ ಅಷ್ಟಾಗಿ ಬೆರೆಯದ ಕರ್ವಾಲೋ ಮಾತ್ರ ಯ...

ನಾ ಕಂಡ ಯಯಾತಿ

Image
ಯಯಾತಿ'- ನಾಲ್ಕಂಕದ ಸಣ್ಣ ನಾಟಕವಾಗಿ ಕಾಣುವ ನಮಗೆ ಪಾತ್ರಗಳಾರರಲ್ಲಿ ಮನುಷ್ಯನ ವಿರಾಟ ದರ್ಶನವನ್ನು ನೀಡುತ್ತದೆ. ನಾಟಕದ ಪ್ರಾರಂಭದಲ್ಲಿ ನಟಿಯೊಡನೆ ಸೂತ್ರಧಾರ ಬರುತ್ತಾರೆ. ಪ್ರೇಕ್ಷಕರನ್ನುದ್ದೇಶಿಸಿ ಸೂತ್ರಧಾರ ನಾಟಕದ ಕುರಿತು ಒಂದು ಕುತೂಹಲಭರಿತ ಮುನ್ನುಡಿಯನ್ನು ನೀಡುತ್ತಾನೆ. ಅಂತ್ಯದಲ್ಲಿ ಅವನಾಡುವ ಮಾತು ಪ್ರಸ್ತುತ ಮತ್ತು ಸರ್ವಕಾಲಿಕ ಸತ್ಯವಾಗಿ ನಿಲ್ಲುತ್ತದೆ. " ಒಮ್ಮೊಮ್ಮೆ ದಾರಿಗುಂಟ ಹೋಗುವಾಗ ನಮ್ಮ ದಾರಿ ಒಡೆದು ಎರಡಾಗುವುದಿಲ್ಲವೇ? ನಾವು ಒಂದನ್ನು ಮಾತ್ರ ಆರಿಸಬಹುದು. ಅದರೊಡನೆ ತತ್ಪೂರ್ತ ನಮ್ಮ ಗುರಿಯೂ ಗೊತ್ತಾಗುತ್ತದೆ. ಆದರೆ ನಮ್ಮ ಹಿಂದೆ ಕಿವಿಗಳ ಸನಿಹದಲ್ಲಿ, ಕೇಳದ ದನಿಯೊಂದು ಪ್ರಶ್ನಿಸಿರುತ್ತದೆ; ಆ ಇನ್ನೊಂದು ದಾರಿಯಲ್ಲಿ ಹೋಗಿದ್ದರೇನಾಗುತ್ತಿತ್ತು? ಏನೇನೋ ಅಗಬಹುದಿತ್ತು! ಆದರೆ…. ಆ ದಾರಿಯ ಗುಟ್ಟು ಅದರೊಡನೆ ಗುಟ್ಟಾಗಿಯೇ ಉಳಿಯಬೇಕು. ನಾವು ನಮ್ಮ ನೇಗಿಲನ್ನು ಹೊತ್ತು ಮುನ್ನಡೆಯಬೇಕು. ನಾವು ಕಟ್ಟಿದ ಅಜ್ಜಿಯ ಕತೆಯನ್ನು ನಾವೇ ಬಾಳಬೇಕು. ಇದೇ ಜೀವನದ ದುರಂತ ಪ್ರಯೋಗ. ಇದೇ ಆಶಾವಾದದ ಮೂಲ. ಇದೇ ನಮ್ಮ ನಾಟಕ". ಸೊಗಸಾದ ನಿರೂಪಣೆಯು ನಮ್ಮ ಮನ ಸೆಳೆಯುತ್ತದೆ. . ಸತತ ಮೂರು ವರ್ಷಗಳು ಓದಿದ ಈ ನಾಟಕವು ಏನೋ ನಮ್ಮ ಆತ್ಮೀಯ ಬಂಧುವೇನೋ ಎಂಬಂತೆ ಪ್ರೀತಿಯಿಂದ ಬಹಳ ಖುಷಿಯಿಂದ ಲೀಲಾಜಾಲವಾಗಿ ಪರೀಕ್ಷೆಗಳಲ್ಲಿ ಪುಟಗಟ್ಟಲೆ ಬರೆಯುತ್ತಿದ್ದೆವು. ನೆನೆಯಲು ಖುಷಿಯೆನಿಸುತ್ತದೆ. ಹಲವು ವರ್ಷಗಳ ನಂತರ ಈಗ ಮತ್ತೊಮ...

ಮೂಕಜ್ಜಿಯ ಕನಸು

Image
… ಅಂಥ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ಸಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯ್ತು. ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ….  ‘ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸುತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು…’ ಬಹುಶ ಮುನ್ನುಡಿಯಲ್ಲಿ ಶಿವರಾಮಕಾರಂತರು ಕಾಣಿಸಿರುವ ಇವೆರಡು ಸಾಲುಗಳು ಸಾಕೇನೋ – ಈ ಅದ್ಭುತ ಪುಸ್ತಕದ ಸಾರಾಂಶವನ್ನು ಎರಡೇ ಮಾತಲ್ಲಿ ಹಿಡಿದಿಡಲು. ಪರಂಪರಾನುಗತವಾಗಿ ಹರಿದುಬಂದ ನಂಬಿಕೆ, ಸಂಪ್ರದಾಯಗಳಲ್ಲಿ ನಿಮಿತ್ತವೆಂಬಂತೆ ಬದುಕು ಸಾಗಿಸಿದ ಜನಮಾನಸದ ಕೆಲವಾದರೂ ಚಿತ್ತಗಳನ್ನು ಕೆದಕಿ ಕದಡಿರಬಹುದಾದ ‘ಏನೀ ಜಗ ? ನಾನೇಕಿಲ್ಲಿದ್ದೇನೆ ?’ ಎಂಬ ಗಹನ ಪ್ರಶ್ನೆಗಳಿಗೆ ತನ್ನರಿವಿನ ಪರಿಧಿಯನುಸಾರ ಉತ್ತರ ಕಂಡುಕೊಳ್ಳುವ ಸೂಕ್ಷ್ಮಚಿತ್ರಣ ಈ ಕಾದಂಬರಿಯ ಸ್ಥೂಲ ಮೊತ್ತ ಎಂದರೆ ತಪ್ಪಾಗಲಾರದು. ನಾಲ್ಕೈದು ಸಾವಿರ ವರ್ಷಗಳಿಂದ ಹರಿದುಬಂದಿರುವ ‘ಸೃಷ್ಟಿ ಸಮಸ್ಯೆ’ಯೊಂದನ್ನು ಮಥಿಸಲು ಯತ್ನಿಸುವ ಅವಾಸ್ತವಿಕತೆಯ ಪ್ರತೀಕವೆನಿಸುವ ಅಜ್ಜಿ ಮತ್ತು ವಾಸ್ತವದ ಪ್ರತಿನಿಧಿಯಾಗುವ ಮೊಮ್ಮಗ ಇಲ್ಲಿನ ಕೇಂದ್ರಬಿಂದು. ಜತೆಗೆ ಪಾತ್ರಧಾರಿಗಾಗಿ ಬರುವ ನಾಗಿ, ರಾಮಣ್ಣ, ಜನ್ನನಂತವರು ತಮ್ಮದೇ ಆದ ಮನೋಧರ್ಮದ ಮೂಲಕ ಆ ಮಥನದ ಸಂವಾದಿಗಳೊ, ಪ್ರತಿವಾದಿಗಳೊ, ಅವಹೇಳನಗಳೋ ಆಗುತ್ತಾ ತಮ್ಮದೇ ಆದ ವ್...

ಕೃಷ್ಣೇಗೌಡನ ಆನೆ. ಕೆ .ಪಿ ಪೂರ್ಣಚಂದ್ರ ತೇಜಸ್ವಿ

Image
ಕಥೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಎಂಬ ಉಕ್ತಿ ಪೂರ್ಣಚಂದ್ರ ತೇಜಸ್ವಿ ಅವರದು. ಕೃಷ್ಣೇಗೌಡನ ಆನೆ ಇದೆ ಚೌಕಟ್ಟಿಗೆ ಸೇರುತ್ತದೆ .ಗೋಳೊರು ಮಠದಲ್ಲಿ ಸಾಕಿಕೊಂಡಿದ್ದ ಆನೆಯ ಹೆಸರು ಗೌರಿ ಇದು ಮಠದ ಸ್ವಾಮಿಗಳನ್ನು ಅಡ್ಡ ಪಲ್ಲಕ್ಕಿಯಲ್ಲಿ ಹೊತ್ತು ತಿರುಗುತ್ತಿತ್ತು .ಆದರೆ ಇದರ ಮಾವುತ ವೇಲಾಯುಧ ಒಬ್ಬ ಕುಡುಕ ಮಠಕ್ಕೆತೊಂದರೆ ಕೊಡಲು ಶುರುಮಾಡಿದ. ಇದನ್ನು ಸಹಿಸಲಾರದ ಮಠದವರು ಆನೆಯನ್ನು ಸಾಗುಹಾಕಲು ಯತ್ನಿಸುತ್ತಿದ್ದರು. ಅದೇ ಸಮಯಕ್ಕೆ ಚಾರ್ಮುಡಿ ಹತ್ತಿರದ ದಟ್ಟ ಅರಣ್ಯವನ್ನು ಸರ್ಕಾರವು ವಿಮೋಕೊ ಕಂಪನಿಗೆ ಬೆಂಕಿಪಟ್ಟಣ ತಯಾರಿಸಲು ಪರವಾನಿಗೆ  ಕಟ್ಟಿತ್ತು. ಈ ಕೆಲಸ ಮಾಡಲು ಆನೆಯಿಂದ ಮಾತ್ರ ಸಾಧ್ಯ ಎಂದು ಕಂಪನಿಗೆ ಅರಿವಾಗಿದ್ದರಿಂದ ಕೇರಳದಿಂದ ಆನೆಯನ್ನು ತರಿಸಲು ಕಂಪನಿ ಯೋಚಿಸುತ್ತಿರುವಾಗ ಕೃಷ್ಣೇಗೌಡ ಕಂಪನಿಯ ಜೊತೆ ಮಾತನಾಡಿ ಕಾಂಟ್ರ್ಯಕ್ಟನ್ನು ತೆಗೆದುಕೊಂಡು .ಗೋಳೂರು ಮಠದ ಆನೆಯನ್ನು ಮತ್ತು ಮಾವುತನ ಸಂಸಾರ ಸಮೇತ ಮೂಡಿಗೆರೆಗೆ ಕರೆತಂದ.  ಆನೆಯಿಂದ ಮಾಡಲು ಸಾಧ್ಯವಾದ ಕೆಲಸದಿಂದ ಕೃಷ್ಣೇಗೌಡ ದುಡ್ಡು ನೋಡುವ ಹಾಗಾದ .ಅದೇ ಸಮಯಕ್ಕೆ ಬೇಸಿಗೆ ಶುರುವಾಯಿತು. ಬೇಸಿಗೆಯಲ್ಲಿ ಮೂಡಿಗೆರೆಯ ಜನರ ಕ್ರೋಧ, ಭಯ ಪ್ರತಿ ವಿಷಯಕ್ಕೂ ಸೈರಣೆ ಕಳೆದುಕೊಳ್ಳುತ್ತಿದ್ದುರು . ಕಾಡಿನ ಪರಿಯೇ ಇಲ್ಲದೆ ಬೆಳೆದ ಆನೆ ಜನರ ನಡುವೆ ಓಡಾಡಿಕೊಂಡು ಅವರು ಕೊಟ್ಟ ಹಣ್ಣುಗಳನ್ನು ತಿನ್ನುತ್ತಿತ್ತು. ಜನಕ್ಕೂ ಆನೆಯ ಮೇಲೆ...

"ಕಿರಗೂರಿನ ಗಯ್ಯಾಳಿಗಳು" ನನ್ನದೊಂದು ಅಭಿಪ್ರಾಯ

Image
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಭಾಷ್ಯ ಮತ್ತು ತನ್ನದೆಯಾದ ನಿರೂಪಣಾ ಶೈಲಿಯಲ್ಲಿ ಚಾಪು ಮೂಡಿಸಿರುವ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ರಚಿಸಿರುವ" ಕಿರಗೂರಿನ ಗಯ್ಯಾಳಿಗಳು " ಒಂದು ನೀಳ್ಗತೆ .ಇದು ಮಹಿಳೆಯರನ್ನು ಸಾಮಾಜಿಕ ಮೌಲ್ಯದ ನೆಲೆಯಲ್ಲಿ ಸಮೀಕರಿಸಿ ಬರೆಯಲಾಗಿದೆ.1991 ರಚಿತವಾದ ಈ ಕಥೆ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಪರಿವರ್ತಿಸುವ ಆಶಯವು ಇಲ್ಲಿ ಕಾಣಬಹುದಾಗಿದೆ. 'ಕಿರಗೂರು' ಸಹ್ಯಾದ್ರಿ ಪರ್ವತಗಳ ಜಟಿಲ ಬಂಧಗಳಲ್ಲಿ ಸಿಕ್ಕಿಕೊಂಡಿದ್ದ ಹಳ್ಳಿ ಅಲ್ಲಿನ ಗಂಡಸರು ಹೆಂಡ ಕುಡಿದು,ಬೀಡಿ ಸೇದಿ ಹೋಗೆ ಹತ್ತಿ ಸಣಕಲ್ ಆಗಿರುವುದನ್ನು ವಿವರಿಸುವ ಲೇಖಕರು ಕಿರಗೂರಿನ ಹೆಂಗಸರ ಸೌಂದರ್ಯವನ್ನು ಕಣ್ಮನ ಸೆಳೆಯುವಂತೆ ವೈಭವೀಕರಿಸಿದ್ದಾರೆ. ಲಿಂಗ ತಾರತಮ್ಯತೆ ಸಮಾಜದ ಮೌಲ್ಯಗಳ ಬುಡಮೇಲು ಮಾಡುವ ಕಥನವಾಗಿದೆ .ಗಯ್ಯಾಳಿ ಎಂದರೆ ಗಂಡುಬೀರಿ ,ಘಾಟಿ ಹೆಂಗಸು ಗಟ್ಟಿಗಿತ್ತಿ ,ಎನ್ನಬಹುದು ಕಥೆಯಲ್ಲಿ ಲೇಖಕರು ಹೆಂಗಸರನ್ನು" ಗಾಂಚಲಿ ಮುಂಡೇರು" ಬಜಾರಿಯರು ಎಂದು ಕರೆದಿದ್ದಾರೆ ಕಿರುಗೂರಿನ ಹೆಂಗಸರ ಧೈರ್ಯ ಸಾಹಸ ,ಪ್ರತಿಭಟನೆ ,ಆಕ್ರಮಣಶೀಲತೆ ,ಉಗ್ರವಾದಕೋಪ, ಪ್ರಶ್ನಿಸುವ ಸಾಮರ್ಥ್ಯ ಈ ಗುಣಗಳು ಹೆಂಗಸರು ತಮ್ಮ ಜೀವನವನ್ನು ನಡೆಸಲು ಬೇಕಿರುವ ಅಂಶಗಳು ಎನಿಸುತ್ತದೆ ಈ  ಸಹಜ ಗುಣಗಳೇ ಕಥಾವಸ್ತುವಿನ ದೊಡ್ಡ ಶಕ್ತಿ.  ಮೂರು ರಾತ್ರಿ ಮೂರು ಹಗಲು ರಭಸದಿಂದ ಬೀಸಿದ ಬಿರುಗಾಳಿಗೆ ತತ್ತರಿಸಿ ಬುಡಸಮೇತ ...