ಕೃಷ್ಣೇಗೌಡನ ಆನೆ. ಕೆ .ಪಿ ಪೂರ್ಣಚಂದ್ರ ತೇಜಸ್ವಿ
ಕಥೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಎಂಬ ಉಕ್ತಿ ಪೂರ್ಣಚಂದ್ರ ತೇಜಸ್ವಿ ಅವರದು. ಕೃಷ್ಣೇಗೌಡನ ಆನೆ ಇದೆ ಚೌಕಟ್ಟಿಗೆ ಸೇರುತ್ತದೆ .ಗೋಳೊರು ಮಠದಲ್ಲಿ ಸಾಕಿಕೊಂಡಿದ್ದ ಆನೆಯ ಹೆಸರು ಗೌರಿ ಇದು ಮಠದ ಸ್ವಾಮಿಗಳನ್ನು ಅಡ್ಡ ಪಲ್ಲಕ್ಕಿಯಲ್ಲಿ ಹೊತ್ತು ತಿರುಗುತ್ತಿತ್ತು .ಆದರೆ ಇದರ ಮಾವುತ ವೇಲಾಯುಧ ಒಬ್ಬ ಕುಡುಕ ಮಠಕ್ಕೆತೊಂದರೆ ಕೊಡಲು ಶುರುಮಾಡಿದ. ಇದನ್ನು ಸಹಿಸಲಾರದ ಮಠದವರು ಆನೆಯನ್ನು ಸಾಗುಹಾಕಲು ಯತ್ನಿಸುತ್ತಿದ್ದರು. ಅದೇ ಸಮಯಕ್ಕೆ ಚಾರ್ಮುಡಿ ಹತ್ತಿರದ ದಟ್ಟ ಅರಣ್ಯವನ್ನು ಸರ್ಕಾರವು ವಿಮೋಕೊ ಕಂಪನಿಗೆ ಬೆಂಕಿಪಟ್ಟಣ ತಯಾರಿಸಲು ಪರವಾನಿಗೆ ಕಟ್ಟಿತ್ತು. ಈ ಕೆಲಸ ಮಾಡಲು ಆನೆಯಿಂದ ಮಾತ್ರ ಸಾಧ್ಯ ಎಂದು ಕಂಪನಿಗೆ ಅರಿವಾಗಿದ್ದರಿಂದ ಕೇರಳದಿಂದ ಆನೆಯನ್ನು ತರಿಸಲು ಕಂಪನಿ ಯೋಚಿಸುತ್ತಿರುವಾಗ ಕೃಷ್ಣೇಗೌಡ ಕಂಪನಿಯ ಜೊತೆ ಮಾತನಾಡಿ ಕಾಂಟ್ರ್ಯಕ್ಟನ್ನು ತೆಗೆದುಕೊಂಡು .ಗೋಳೂರು ಮಠದ ಆನೆಯನ್ನು ಮತ್ತು ಮಾವುತನ ಸಂಸಾರ ಸಮೇತ ಮೂಡಿಗೆರೆಗೆ ಕರೆತಂದ. ಆನೆಯಿಂದ ಮಾಡಲು ಸಾಧ್ಯವಾದ ಕೆಲಸದಿಂದ ಕೃಷ್ಣೇಗೌಡ ದುಡ್ಡು ನೋಡುವ ಹಾಗಾದ .ಅದೇ ಸಮಯಕ್ಕೆ ಬೇಸಿಗೆ ಶುರುವಾಯಿತು. ಬೇಸಿಗೆಯಲ್ಲಿ ಮೂಡಿಗೆರೆಯ ಜನರ ಕ್ರೋಧ, ಭಯ ಪ್ರತಿ ವಿಷಯಕ್ಕೂ ಸೈರಣೆ ಕಳೆದುಕೊಳ್ಳುತ್ತಿದ್ದುರು . ಕಾಡಿನ ಪರಿಯೇ ಇಲ್ಲದೆ ಬೆಳೆದ ಆನೆ ಜನರ ನಡುವೆ ಓಡಾಡಿಕೊಂಡು ಅವರು ಕೊಟ್ಟ ಹಣ್ಣುಗಳನ್ನು ತಿನ್ನುತ್ತಿತ್ತು. ಜನಕ್ಕೂ ಆನೆಯ ಮೇಲೆ ಪ್ರೀತಿ ಇತ್ತು. ಲೈನ್ ಮ್ಯಾನ್ ದುರ್ಗಪ್ಪ ಮರವನ್ನು ಕತ್ತರಿಸಲು ಲೇಖಕರ ಹತ್ತಿರ ಕೊಡಲಿ ತೆಗೆದುಕೊಂಡು ಹೋಗಿದ್ದ ಅದನ್ನು ಫಾರೆಸ್ಟ್ ಆಫೀಸರ್ ನಾಗರಾಜು ತೆಗೆದಿಟ್ಟುಕೊಂಡು ಪೋಲಿಸ್ ಕೇಸ್ ಹಾಕುತ್ತೇನೆಂದು ಎದುರಿಸುತ್ತಿದ್ದ .ಟೆಲಿಫೋನ್, ಕರೆಂಟ್ ,ಪಿಡಬ್ಲ್ಯೂಡಿ ಇವರು ನಮ್ಮ ಶತ್ರುಗಳು ಎಂದು ಉದ್ಗರಿಸಿದ್ದ. ಆತನನ್ನು ಕೇಸು ಹಾಕುತ್ತೇನೆ ಎಂದು ಎದುರಿಸುತ್ತಿದ್ದ. ಇದನ್ನು ನಂಬಿದ ದುರ್ಗಪ್ಪ ಎಲ್ಲದಕ್ಕೂ ಕಾರಣ ಕೃಷ್ಣೇಗೌಡನ ಆನೆ ಎಂದು ಅಂದುಕೊಂಡಿದ್ದ. ಅದೇ ಸಮಯಕ್ಕೆ ಆನೆ ವಿದ್ಯುತ್ ಕಂಬದ ಶಾಕ್ ನಿಂದಾಗಿ ಒಂದು ದಿನ ತಲೆಕೆಟ್ಟು ಕಾಡಿಗೆ ಓಡಿಹೋಯಿತು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಅದೇ ಆನೆ ಒಂದು ದಿನ ಮೂಡುಗೆರೆ ಬೀದಿಯಲ್ಲಿ ಪ್ರತ್ಯಕ್ಷವಾಯಿತು . ಮೊದಲ ಅಷ್ಟು ಪ್ರೀತಿ ಆನೆ ಮೇಲೆ ಜನರಲ್ಲಿ ಇಲ್ಲವಾದರೂ ಅದು ಬದುಕಲಿ ಎಂಬ ಭಾವವಿತ್ತು.ಅದೇ ಸಮಯಕ್ಕೆ ಮರ ಕಡಿಯುವುದರ ಬಗ್ಗೆ ಸರ್ಕಾರ ಕಾನೂನು ನಿಬಂಧನೆಗಳನ್ನು ವಿಪರೀತ ಬಿಗಿಮಾಡಿದರಿಂದ ನಾಟ ಸಾಗಿಸುವುದು, ಕಳ್ಳಸಾಗಣೆ ರಾತ್ರಿಯ ಕೆಲಸವಾಗಿತ್ತು. ವೇಲಾಯುಧ ಮತ್ತು ಆನೆಗೂ ರಾತ್ರಿಯೇ ಕೆಲಸ ಇದ್ದುದ್ದರಿಂದ ಶಿವೇಗೌಡರ ಸಾಮಿಲ್ ಒಳಗಡೆ ನಿಂತ ಲೋಡ್ ಲಾರಿಯಲ್ಲಿದ್ದ ಮರದ ದಿಮ್ಮಿಗಳನ್ನು ಇಳಿಸಬೇಕಿತ್ತು. ವೇಲಾಯುಧ ಆನೆಗೆ ಮರದ ದಿಮ್ಮಿಗಳನ್ನು ಇಳಿಸಲು ಹೇಳಿದ್ದ ಆನೆಯು ಅದೇ ಕೆಲಸವನ್ನು ಮಾಡುವಾಗ ನಾಟವನ್ನು ಬಿಚ್ಚಲು ಮರೆತ ಕ್ಲೀನರ್ ನಿಂದಾಗಿ ಲಾರಿ ಬುಡಸಮೇತ ವಾಯಿತು .ಇದರಿಂದ ಡ್ರೈವರ್ ತಲೆ ಜಜ್ಜಿ ಪರಂಧಾಮಕ್ಕೆ ಹೋದ. ಹೆದರಿದ ಶಿವೇಗೌಡ ವೇಲಾಯುಧನಿಗೆ ಬೈದರು ಆತ ಎಲ್ಲಾ ತಪ್ಪನ್ನು ಆನೆ ಮೇಲೆ ಹೊರಿಸಿ ವೇಲಾಯುಧ ತಪ್ಪಿಸಿಕೊಂಡ. ಈ ವಿಷಯ ಇಡೀ ಊರಿಗೆ ಗೊತ್ತಾಯ್ತು ಆನೆಯನ್ನು ಎಲ್ಲರೂ ಅಪರಾಧಿಯಂತೆ ಕಾಣತೊಡಗಿದರು. ಮೂಡಿಗೆರೆಯಲ್ಲಿ ಹುಚ್ಚುನಾಯಿಗಳ ಆರ್ಭಟ ಜಾಸ್ತಿಯಾಯಿತು ಜಬ್ಬರ್ ಗೆ ನಾಯಿ ಕಚ್ಚಿತು ಎಂಬ ವಿಷಯವನ್ನು ಅರಿತ ಲೇಖಕರು ಸಹ ಅವನ ಜೊತೆ ಮುನಿಸಿಪಾಲಿಟಿ ಗೆ ಕಂಪ್ಲೇಂಟ್ ಕೊಟ್ಟರೂ ಸಹ ಏನೂ ಪ್ರಯೋಜನವಾಗಲಿಲ್ಲ. ಇದೇ ಸಮಯಕ್ಕೆ ಟೆಲಿಕಾಂ ಲೈನಿಗೆ ಕರೆಂಟ್ ಲೈನ್ ತಾಗಿ ಲೈನ್ ಮ್ಯಾನ್ ತಿಪ್ಪಣ್ಣ ಸಾವಿಗೀಡಾದ ವಿಷಯ ಎಲ್ಲರಿಗೂ ತಿಳಿಯಿತು. "ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ "ಎಂಬ ಮಾತಿನಂತೆ ಎಲ್ಲದಕ್ಕೂ ಆನೆಯೇ ಅಪರಾಧಿ ಎಂದು ಊರಿನವರೆಲ್ಲರೂ ತೀರ್ಮಾನಿಸಿ ಆನೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ತೀರ್ಮಾನಿಸಲಾಯಿತು. ಇದರ ಹೊಣೆ ಫಾರೆಸ್ಟ್ ಆಫೀಸರ್ ನಾಗರಾಜನಿಗೆ ವಹಿಸಿದರು. ವೇಲಾಯುಧ ಆನೆಗೆ ಬುದ್ಧಿ ಕಲಿಸಲು ಹೋಗಿ ಆತನು ಪರಂಧಾಮಕ್ಕೆ ಹೋದ ಮತ್ತು ಫಾರೆಸ್ಟ್ ಆಫೀಸರ್ ನಾಗರಾಜು ಕಾಣೆಯಾದ ಇದರಿಂದ ಊರಿನ ಅನೇಕ ಊಹಾಪೋಹ ವಿಷಯಗಳಿಗೆ ಆನೆ ಪ್ರಮುಖ ಕಾರಣ ಎಂಬುದನ್ನು ಇಡೀ ಊರು ತೀರ್ಮಾನಿಸಿತ್ತು .ಕೃಷ್ಣೇಗೌಡನ ಆನೆ ಮತ್ತೆ ಬಂದರೆ ಏನು ಎಂದು ಯೋಚಿಸಲಾರಂಭಿಸಿದ ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ, ಎಲ್ಲದಕ್ಕೂ ಆನೆ ಕಾರಣ ಎಂಬುದು ಹಾಸ್ಯಾಸ್ಪದವಾಗಿ ಹೋಯಿತು.