"ಕಿರಗೂರಿನ ಗಯ್ಯಾಳಿಗಳು" ನನ್ನದೊಂದು ಅಭಿಪ್ರಾಯ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಭಾಷ್ಯ ಮತ್ತು ತನ್ನದೆಯಾದ ನಿರೂಪಣಾ ಶೈಲಿಯಲ್ಲಿ ಚಾಪು ಮೂಡಿಸಿರುವ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ರಚಿಸಿರುವ" ಕಿರಗೂರಿನ ಗಯ್ಯಾಳಿಗಳು" ಒಂದು ನೀಳ್ಗತೆ .ಇದು ಮಹಿಳೆಯರನ್ನು ಸಾಮಾಜಿಕ ಮೌಲ್ಯದ ನೆಲೆಯಲ್ಲಿ ಸಮೀಕರಿಸಿ ಬರೆಯಲಾಗಿದೆ.1991 ರಚಿತವಾದ ಈ ಕಥೆ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಪರಿವರ್ತಿಸುವ ಆಶಯವು ಇಲ್ಲಿ ಕಾಣಬಹುದಾಗಿದೆ. 'ಕಿರಗೂರು' ಸಹ್ಯಾದ್ರಿ ಪರ್ವತಗಳ ಜಟಿಲ ಬಂಧಗಳಲ್ಲಿ ಸಿಕ್ಕಿಕೊಂಡಿದ್ದ ಹಳ್ಳಿ ಅಲ್ಲಿನ ಗಂಡಸರು ಹೆಂಡ ಕುಡಿದು,ಬೀಡಿ ಸೇದಿ ಹೋಗೆ ಹತ್ತಿ ಸಣಕಲ್ ಆಗಿರುವುದನ್ನು ವಿವರಿಸುವ ಲೇಖಕರು ಕಿರಗೂರಿನ ಹೆಂಗಸರ ಸೌಂದರ್ಯವನ್ನು ಕಣ್ಮನ ಸೆಳೆಯುವಂತೆ ವೈಭವೀಕರಿಸಿದ್ದಾರೆ. ಲಿಂಗ ತಾರತಮ್ಯತೆ ಸಮಾಜದ ಮೌಲ್ಯಗಳ ಬುಡಮೇಲು ಮಾಡುವ ಕಥನವಾಗಿದೆ .ಗಯ್ಯಾಳಿ ಎಂದರೆ ಗಂಡುಬೀರಿ ,ಘಾಟಿ ಹೆಂಗಸು ಗಟ್ಟಿಗಿತ್ತಿ ,ಎನ್ನಬಹುದು ಕಥೆಯಲ್ಲಿ ಲೇಖಕರು ಹೆಂಗಸರನ್ನು" ಗಾಂಚಲಿ ಮುಂಡೇರು" ಬಜಾರಿಯರು ಎಂದು ಕರೆದಿದ್ದಾರೆ ಕಿರುಗೂರಿನ ಹೆಂಗಸರ ಧೈರ್ಯ ಸಾಹಸ ,ಪ್ರತಿಭಟನೆ ,ಆಕ್ರಮಣಶೀಲತೆ ,ಉಗ್ರವಾದಕೋಪ, ಪ್ರಶ್ನಿಸುವ ಸಾಮರ್ಥ್ಯ ಈ ಗುಣಗಳು ಹೆಂಗಸರು ತಮ್ಮ ಜೀವನವನ್ನು ನಡೆಸಲು ಬೇಕಿರುವ ಅಂಶಗಳು ಎನಿಸುತ್ತದೆ ಈ  ಸಹಜ ಗುಣಗಳೇ ಕಥಾವಸ್ತುವಿನ ದೊಡ್ಡ ಶಕ್ತಿ. 
ಮೂರು ರಾತ್ರಿ ಮೂರು ಹಗಲು ರಭಸದಿಂದ ಬೀಸಿದ ಬಿರುಗಾಳಿಗೆ ತತ್ತರಿಸಿ ಬುಡಸಮೇತ ಕಿತ್ತು ಬೀಳುವ ಭಾರಿ ಗಾತ್ರದ ಹೆಬ್ಬಲಸಿನ ಮರಕ್ಕೂ ಮತ್ತು ಹೆಣ್ಣಿನ ಮೇಲೆ ಏರಿರುವ ಕಟ್ಟುಪಾಡಿಗೂ ಸಂಬಂಧವಿದೆ .ಇಲ್ಲಿಗೆ ಗೌಡರ ಸೊಸೆ ದಾನಮ್ಮ ಮನೆಯ ಮುಂದೆ ಇರುವ ಹೆಬ್ಬಲಸಿನ ಮರಕ್ಕೆ ಯಾವಾಗಲೂ ಹಿಡಿಶಾಪ ಹಾಕುತ್ತಿರುತ್ತಾರೆ .ಈ ಮರವು ಕಿರಗೂರಿನಲ್ಲಿ ಬೀಸಿದ ಗಾಳಿಯಿಂದಾಗಿ ಬುಡಸಮೇತ ಬಿದ್ದು ಹೊಲಗೇರಿಯ ಕಡೆ ಓಡುತ್ತಿದ್ದ ಮರವನ್ನು ನಿಲ್ಲಿಸುವ ಆತಂಕದಲ್ಲಿ ದಾನಮ್ಮ ಓಡುತ್ತಿರುವಾಗ ರುದ್ರಿಯ ಅತ್ತೆಯನ್ನು ಕಾಪಾಡುತ್ತಾಳೆ.   ದಾನಮ್ಮದ್ದದರಿಂದಲೇ ಗಾಳಿ ನಿಂತಿತ್ತು. ಎಂಬುದನ್ನು    ಇಡೀ ಊರಿನ ಜನ ನಂಬುತ್ತಾರೆ. ಯಾರು ಮೂರನೇ ವ್ಯಕ್ತಿಯ ಕೊಟ್ಟ ಕಂಪ್ಲೇಂಟ್ನ ಸಲುವಾಗಿ ಪೊಲೀಸರು ಗೌಡರನ್ನು ಕರೆದು ಹೋಗಿ ಹಿಂದುಮುಂದು ನೋಡದೆ ಚೆನ್ನಾಗಿ ಬಾರಿಸುತ್ತಾರೆ .ಕಾಳೇಗೌಡ ತನ್ನ ಹೆಂಡತಿಯನ್ನು ಗುಡ್ಡು ಹಸ ಎಂದುು ನಿಂದಿಸುತ್ತಿದ್ದ. ಈ ಮಾತಿನಿಂದ ನೊಂದಿದ್ದ ಆಕೆ ಆತನನ್ನು ಬಿಟ್ಟುುು ಇನ್ನೊಬ್ಬರ ಜೊತೆ ಓಡಿ ಹೋಗುತ್ತಾಳೆ. ನಾಗಮ್ಮತುಂಬಾ ಒಳ್ಳೆ ಹೆಂಗಸು ಆಕೆ ಹೀಗೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಊರಿನ ಜನರು ಆಕೆಯನ್ನು ಹುಡುಕಿ ಕರೆತಂದು ಕಾಳೇಗೌಡನಿಗೆ ಒಪ್ಪಿಸುತ್ತಾರೆ .ಇದನ್ನು ಓಪ್ಪದ ಆತನನ್ನುನು ಕಿರುಗೂರಿನ ಹೆಂಗಸರೆಲ್ಲ ಸೇರಿ ಎಲ್ಲಾ ಗಂಡಸರಿಗೂ ಬುದ್ಧಿ ಕಲಿಸುತ್ತಾರೆ.  ಕಿರಗೂರಿನಲ್ಲಿದ್ದ ಸಾರಾಯಿ ಅಂಗಡಿಯನ್ನು ಸುಟ್ಟುಹಾಕುತ್ತಾರೆ .ಇದು ಅನೇಕ ಘಟನೆಗಳಿಗೆ ನಾಂದಿ ಹಾಗುತ್ತದೆ.

           ಮುಂದಿನ ಭಾಗಕ್ಕೆ ನಿರೀಕ್ಷಿಸಿ 

               ವಂದನೆಗಳು

Popular posts from this blog

ಕೃಷ್ಣೇಗೌಡನ ಆನೆ. ಕೆ .ಪಿ ಪೂರ್ಣಚಂದ್ರ ತೇಜಸ್ವಿ

ಸಂಧ್ಯಾರಾಗ

ನಾ ಕಂಡ ಯಯಾತಿ